Affiliated to Davangere University Davangere,

About Kannada Department

ಕಾಲೇಜಿನ ಕನ್ನಡ ವಿಭಾಗವು 1958 ರಲ್ಲಿ ಕಾರ್ಯಾಗಾರಂಭಗೊಂಡಿದ್ದು, ಕಾಲೇಜಿನಷ್ಟೇ ಪುರಾತವಾಗಿದೆ. ಹಿಂದೆ ವಿಭಾಗದ ಮುಖ್ಯಸ್ಥರಾಗಿ ಡಾ. ಎಂ.ಜಿ. ಈಶ್ವರಪ್ಪನವರು ಹಲವು ವರ್ಷ ಸುಧೀರ್ಘ ಕಾರ್ಯ ನಿರ್ವಹಿಸಿರುತ್ತಾರೆ. ತದನಂತರ ವಿಭಾಗದ ಮುಖ್ಯಸ್ಥರಾಗಿ ಸಿ.ಪಿ. ಮಲ್ಲಿಕಾರ್ಜು ನಪ್ಪನವರು ಕೆಲವು ವರ್ಷ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿರುತ್ತಾರೆ. ವಿಭಾಗವು 2006 ರಿಂದ ಖಾಯಂ ಪ್ರಾಧ್ಯಾಪಕರನ್ನು ಹೊಂದದೇ ಅತಿಥಿ ಉಪನ್ಯಾಸಕರಿಂದಲೇ ಕಾರ್ಯನಿರ್ವಹಿಸುತ್ತ ಬಂದಿದೆ. 2007 ರಿಂದ 2020 ರ ವರೆಗೆ ವಿಭಾಗದ ಮುಖ್ಯಸ್ಥರಾಗಿ ಶಿವಪ್ರಸಾದ್ ಕಾರ್ಯನಿರ್ವಹಿಸಿ ರುತ್ತಾರೆ. ಜೊತೆಗೆ ಕೊಟ್ರಪ್ಪ ಕೆ. ಇವರು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಸೆಪ್ಟೆಂಬರ್-20, 2021 ರಿಂದ ಕನ್ನಡ ವಿಭಾಗಕ್ಕೆ ಖಾಯಂ ಸಹಾಯಕ ಪ್ರಾಧ್ಯಾಪಕರಾಗಿ ಶ್ರೀ ಶಿವಪ್ಪ ಮುಳ್ಳೂರ ನೇಮಕ ಹೊಂದಿದ್ದು, ಜೊತೆಗೆ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಭಾಗದ ಮುಖ್ಯಸ್ಥರಾದ ಶಿವಪ್ಪ ಮುಳ್ಳೂರ ಇವರು ಈ ಹಿಂದೆ ವಿಚಾರ ಸಂಕಿರಣ ಕಾರ್ಯಾಗಾರ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದು, ಜೊತೆಗೆ ಲೇಖನಗಳನ್ನು ಕೂಡ ಬರೆದಿರುತ್ತಾರೆ. ಇತರೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರಿಂದ ಹೊಸ ಬೋಧನಾ ಕೌಶಲ್ಯವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿದೆ.

2023-24ನೇ ಸಾಲಿನ ಕನ್ನಡ ವಿಭಾಗದಲ್ಲಿ ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಪ್ರಥಮ ಮತ್ತು ದ್ವಿತೀಯ ಬಿ.ಎಸ್.ಸಿ. ಪದವಿ ತರಗತಿಯಲ್ಲಿ ಒಟ್ಟು 258 ಜನ ವಿದ್ಯಾರ್ಥಿಗಳಿದ್ದಾರೆ. ವಿಭಾಗವು ಪ್ರತ್ಯೇಕವಾದ ಗ್ರಂಥಾಲಯವನ್ನು ಹೊಂದಿರುವುದಿಲ್ಲ. ಆದರೆ 6000 ಕ್ಕೂ ಹೆಚ್ಚು ಪುಸ್ತಕಗಳನ್ನು 04 ನಿಯತ ಕಾಲಿಕೆಗಳನ್ನು ಹೊಂದಿದೆ. ವಿಭಾಗಕ್ಕೆ ಪ್ರತ್ಯೇಕ ಕಂಪ್ಯೂಟರ್ ಯಂತ್ರ ವ್ಯವಸ್ಥೆ ಇಲ್ಲವಾಗಿದ್ದು, ಗ್ರಂಥಾಲಯದಲ್ಲಿನ ಕಂಪ್ಯೂಟರ್‌ಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ.

ಇತ್ತೀಚೆಗೆ ಬದಲಾದ ರಾಜ್ಯ ಶಿಕ್ಷಣ ನೀತಿ ಅಡಿಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ನಿರ್ಧರಿಸಲು ಎರಡು ಲಘ ಪರೀಕ್ಷೆಗಳನ್ನು ಹಾಗೂ ಒಂದು ಗೃಹ ಲೇಖನ ನೀಡಿ, ಪ್ರತಿ ಸೆಮಿಸ್ಟರ್ನಲ್ಲಿಯೂ ಅಂಕಗಳನ್ನು ನೀಡಲಾಗುವುದು. ಜೊತೆಗೆ ವಿದ್ಯಾರ್ಥಿಗಳನ್ನು ಗುಂಪು ಚರ್ಚೆ, ವಿಚಾರ ಸಂಕಿರಣ, ಕವಿತಾ ವಾಚನ, ಭಾಷೆ ಮತ್ತು ಸಾಹಿತ್ಯದ ಆಸಕ್ತಿ ಮೂಡಿಸಲು ಪ್ರೇರೇಪಿಸಲಾಗುವುದು. ಸೆಮಿಸ್ಟರ್ ಪದ್ಧತಿಯಿಂದಾಗಿ ವಿದ್ಯಾರ್ಥಿ/ವಿದ್ಯಾರ್ಥಿನಿಯ ಫಲಿತಾಂಶ ಶೇಕಡಾ ತೊಂಭತ್ತೊಂಬತ್ತ ರಷ್ಟು ಇದೆ. ಶೈಕ್ಷಣಿಕ ಗುಣಮಟ್ಟ ಮೌಲ್ಯಮಾಪನ ಮರು ವರದಿಯನ್ನು ಸಲ್ಲಿಸುವ ಸಂದರ್ಭದಲ್ಲಿ ವಿಭಾವು ಮುಂದಿನ ವರ್ಷಗಳಲ್ಲಿ ಹಾಕಿಕೊಂಡಿರುವ ಕ್ರಿಯಾ ಯೋಜನೆಗಳು ಈ ಕೆಳಕಂಡಂತೆ ಹೊಂದಿದೆ.